Recent Posts:
- ಅಡ್ಡೂರ ದೇಬೆ, ಕುತ್ತಿಪುನ್ಕೆ ಉಲ್ಲೇರಗುತ್ತು - ಪಾರ್ದನ
- ತುಳುವೆರೆ ಮರಣಡು ಬೊಜ್ಜದ ಕ್ರಮ
- ದೀಪದೆಣ್ಣೆ
- ಬೈದ್ಯರು ಮತ್ತು ತುಳುನಾಡ ದೈವಗಳು
- ಕೋಟಿ ಚೆನ್ನಯರು ಮತ್ತು ಅವರ ಕುಟುಂಬ ದೈವಗಳ ವಿಷಯದಲ್ಲಿರುವ ಗೊಂದಲ
- ಎಣ್ಮೂರ ಕ್ರಮದಲ್ಲಿ ಆಗುತ್ತಿರುವ ಬೈದೇರುಗಳ ನೇಮ
ತುಳುನಾಡ ನಂಬಿಕೆಯಲ್ಲಿ ಗೆಜ್ಜೆ ಕತ್ತಿಯ ಮಹತ್ವ
ನವೀನತೆಯ ಯುಗದಲ್ಲಿ ನಾವು ಇಂದು
ಗೆಜ್ಜೆಕತ್ತಿಯನ್ನು ಕೇವಲ ಮದುವೆಯ ಸಮಯದಲ್ಲಿ ಮಾತ್ರಮದುಮಗಳ ಕೈಯಲ್ಲಿಇರುವುದನ್ನು ಗಮನಿಸಿರಬಹುದು ಆದರೆ ಈಗೆಜ್ಜೆಕತ್ತಿಯ ಮಹತ್ವ ಇದರಿಂದಲು ಆಚೆಗಿದೆ. ಅದೊಂದುಅಧಿಕಾರದ ಸಂಕೇತ ಅದೇ ರೀತಿರಕ್ಷಣೆಯ ಸಂಕೇತವು ಹೌದು.
ಹಿಂದಿನ ಕಾಲದಲ್ಲಿ
ಹೆಣ್ಣು ಪ್ರಾಯಕ್ಕೆ ಬಂದಾಗತಾಯಿಯಾದವಳು ಮಗಳ ಕೈಯಲ್ಲಿ ಯಾವತ್ತು ಇರುವಂತೆ ಸಣ್ಣಕತ್ತಿಯನ್ನು ನೀಡುತ್ತಿದ್ದಳು. ಸಣ್ಣ ಹಿಡಿಯಿರುವ ಇದು ತುದಿಯಲ್ಲಿಅರ್ಧ ಚಂದ್ರಾಕೃತಿಯ ರಚನೆಯಿದ್ದು ಹಿಡಿಯ ತುದಿಯಲ್ಲಿ ಅಲಂಕಾರಕ್ಕಾಗಿಸಣ್ಣ ಗೆಜ್ಜೆಗಳು ಇರುತ್ತದೆ. ಇದೊಂದುಆತ್ಮ ರಕ್ಷಣೆಮತ್ತುಪ್ರಾಣ ರಕ್ಷಣೆಯ ಸಂಕೇತವಾಗಿ ಆಕೆ ಯಾವತ್ತು ಅದನ್ನು ಸೊಂಟದಲ್ಲೆ ಇಟ್ಟುಕೊಳ್ಳುತ್ತಿದ್ದಳು. ಇಂದು ನಾವು ಹೆಣ್ಣುಮಕ್ಕಳ ಸ್ವ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದರೆ ಹಿರಿಯರು ಅದನ್ನುಗೆಜ್ಜೆಕತ್ತಿನೀಡುವ ಮೂಲಕ ಮಾಡಿ ತೋರಿಸಿದ್ದರು. ಅಂದರೆ ಅವರ ಅಲೋಚನೆಗಳು ಮಾತಿನ ಮೂಲಕವಲ್ಲ ಬದಲಾಗಿ ಅನುಷ್ಠಾನಕ್ಕೆ ಬರುತ್ತಿದ್ದವು. ಅದೇ ರೀತಿ ಮಗಳು ಪ್ರಾಯಕ್ಕೆ ಬಂದು ಮದುವೆಯಾದಾಗ ತಾಯಿಯು ತನ್ನ ಮನೆಯಅಧಿಕಾರ ಹಸ್ತಾಂತರವು ಕೂಡ ಗೆಜ್ಜೆಕತ್ತಿಯನ್ನು ನೀಡುವುದರ ಮೂಲಕ ಆಗುತ್ತಿತ್ತು.ಗೆಜ್ಜೆ ಕತ್ತಿ; ಚಿತ್ರಕೃಪೆ - ಮಹೇಶ್_ಬೇೂಳೂರು
ತುಳುನಾಡಿನಲ್ಲಿಮಾತೃಪ್ರಧಾನಕುಟುಂಬವಿದ್ದು ಇಲ್ಲಿ ತಾಯಿಯಿಂದ ಮಗಳಿಗೆ ಆಸ್ತಿ ಪರಭಾರೆಯಾಗುತ್ತಿದ್ದು ಇಲ್ಲಿಮನೆ ಅಳಿಯಎಂಬ ಸಂಪ್ರಧಾಯವೆ ಹೆಚ್ಚಾಗಿತ್ತು. ಆದುದರಿಂದ ಎಲ್ಲಾ ಆಸ್ತಿಗಳ ಅಧಿಕಾರಹೆಣ್ಣಿಗೆಬರುತ್ತಿತ್ತು ಆದುದರಿಂದ ತಾಯಿಯು ಮಗಳ ಮದುವೆಯ ನಂತರ ತನ್ನ ಅಧಿಕಾರವನ್ನು ಆಕೆಗೆ ಬಿಟ್ಟುಕೊಡುತ್ತಿದ್ದಳು. ಇಲ್ಲಿ ಹೆಣ್ಣು ಗಂಡಿನ ಅಡಿಯಾಳಾಗದೆ ಗಂಡಿನ ಸಹಾಯದಿಂದ ಅಧಿಕಾರ ಚಲಾವಣೆ ಮಾಡುತ್ತಿದ್ದಳು. ಇವತ್ತಿಗು ಕೂಡತುಳುನಾಡಿನಅಳಿಯ ಕಟ್ಟಿನಕುಟುಂಬಗಳಆಸ್ತಿ ಪತ್ರವನ್ನು ನೋಡಿದರೆ ಅಲ್ಲಿ ಆಸ್ತಿಯ ಪಟ್ಟೆ ಇರುವುದು ಹೆಣ್ಣಿನ ಹೆಸರಿನಲ್ಲಿ ಅದೇ ರೀತಿ ಆಕೆಯ ನಂತರ ಆಕೆಯ ದೊಡ್ಡ ಮಗಳ ಹೆಸರಿಗೆ ಅದು ನಮೂದಿಸಲ್ಪಡುತ್ತಿತ್ತು. ಇಲ್ಲಿ ಹೆಣ್ಣಿಗಿರುವ ಅಧಿಕಾರವನ್ನು ಸೂಚಿಸುತ್ತಿತ್ತು.
ಗೆಜ್ಜೆಕತ್ತಿಯ ಉಲ್ಲೇಖ
ದೇಯಿ ಬೈದೆತಿಯ ಕಥಾನಕದಲ್ಲಿ ಬರುತ್ತದೆ. ದೇಯಿ ಬೈದೆತಿಯುಪೆರುಮಲೆ ಬಲ್ಲಾಳ ಕುಜುಂಬ ಮುದ್ಯನಿಗೆ ಔಷದೋಪಚಾರ ಮಾಡಲು ಹೊರಟಾಗ ಅತ್ತಿಗೆಸೊನ್ನೆ ಸೋಮಿ ಬೈದೆತಿಯು ಗೆಜ್ಜೆಕತ್ತಿ ಕೊಟ್ಟುಮಗಳೆ ನಿನ್ನ ಮಾನ ಪ್ರಾಣವು ಈ ಗೆಜ್ಜೆಕತ್ತಿಯಲ್ಲಿ ಇದೆ ನಿನ್ನೊಂದಿಗೆ ನಾವಿಲ್ಲ ಈ ಗೆಜ್ಜೆಕತ್ತಿ ಇರುತ್ತದೆಎಂದು ಹೇಳುತ್ತಾಳೆ. ಅಂದರೆ ಅಂದಿನ ಕಾಲದಲ್ಲಿ ಅದು ಅಷ್ಟು ಮಹತ್ವವನ್ನು ಪಡೆಯುತ್ತಿತ್ತು. ಅದೇ ರೀತಿಬಾಣಂತಿ ತಾಯಿಬಹಿರ್ದೆಸೆಗೆ ಹೊರಗೆ ಹೋಗುವಾಗ ಆಕೆಯ ಕೈಯಲ್ಲಿ ಗೆಜ್ಜೆಕತ್ತಿ ಇರುತ್ತಿತ್ತು. ಇದು ಆಕೆಯನ್ನುದುಷ್ಟ ಶಕ್ತಿಮತ್ತುಗಾಳಿ ಸೋಂಕಿನಿಂದ ಕಾಪಾಡುತ್ತದೆ ಎನ್ನುವ ಬಲವಾದ ನಂಬಿಕೆಯಿಂದ. ಇದಕ್ಕೆ ಉದಾಹರಣೆಯಾಗಿ ಇಂದಿಗು ಕೂಡದೇಯಿ ಬೈದೆತಿಮತ್ತುಮಾಯಂದಾಲ್(ಮಾಣಿಬಾಲೆ) ಶಕ್ತಿಗಳ ನೇಮದ ಸಮಯದಲ್ಲಿ ಆಯುಧವನ್ನಾಗಿ ಗೆಜ್ಜೆಕತ್ತಿಯನ್ನೆ ನೀಡುವುದು ಕಾರಣ ಅವರಿಬ್ಬರು ಬಾಣಂತಿ ಎನ್ನುವ ನಂಬಿಕೆಯಿಂದ.
Share this postಹೆಣ್ಣು ಪ್ರಾಯಕ್ಕೆ ಬಂದಾಗಲೆ ಆಕೆಯ
ಪ್ರಾಣಮತ್ತುಮಾನರಕ್ಷಣೆಗಾಗಿ ಕೊಡುತ್ತಿದ್ದು ಇಂದು ಕೇವಲ ಮದುವೆಯ ಸಮಯದಲ್ಲಿ ಮತ್ತುದೈವಗಳ ಆಯುಧವಾಗಿ ಸೀಮಿತ ಚೌಕಟ್ಟಿನಲ್ಲಿ ಹುದುಗಿ ಹೋಗಿದೆ. ಹಿರಿಯರ ನಂಬಿಕೆಗಳು ಬುಡಮೇಲಾಗಿದೆ ಹೊಸತ್ತನ್ನು ಹುಡುಕುವ ತವಕ ಯುವಜನತೆಗೆ ಅದರ ಧಾವಂತದಲ್ಲಿ ಹಳೆಯ ನಂಬಿಕೆಗಳು ಮಕ್ಕಡೆ ಮಲಗಿಕೊಂಡಿದೆ. ಹಿರಿಯರ ದೂರದೃಷ್ಟಿಯ ಅಲೋಚನೆಗಳುಮೂಡನಂಬಿಕೆಯ ಬೇಲಿಯಲ್ಲಿ ಬಂಧಿಯಾಗಿದೆ. ಹಿರಿಯರ ನಂಬಿಕೆಗಳಿಗೆಮರುಜೀವನೀಡುವವರು ಯಾರೋ ಕಾದು ನೋಡಬೇಕಿದೆ.ಬರಹ:
ಶೈಲು_ಬಿರ್ವ_ಅಗತ್ತಾಡಿ_ದೋಲ_ಬಾರಿಕೆ

