Recent Posts:
- ಅಡ್ಡೂರ ದೇಬೆ, ಕುತ್ತಿಪುನ್ಕೆ ಉಲ್ಲೇರಗುತ್ತು - ಪಾರ್ದನ
- ತುಳುವೆರೆ ಮರಣಡು ಬೊಜ್ಜದ ಕ್ರಮ
- ದೀಪದೆಣ್ಣೆ
- ಬೈದ್ಯರು ಮತ್ತು ತುಳುನಾಡ ದೈವಗಳು
- ಕೋಟಿ ಚೆನ್ನಯರು ಮತ್ತು ಅವರ ಕುಟುಂಬ ದೈವಗಳ ವಿಷಯದಲ್ಲಿರುವ ಗೊಂದಲ
- ಎಣ್ಮೂರ ಕ್ರಮದಲ್ಲಿ ಆಗುತ್ತಿರುವ ಬೈದೇರುಗಳ ನೇಮ
ಎಣ್ಮೂರ ಕ್ರಮದಲ್ಲಿ ಆಗುತ್ತಿರುವ ಬೈದೇರುಗಳ ನೇಮ
ಪ್ರಪಂಚದಲ್ಲಿ ಎಲ್ಲಿ ಹೋದರು ಸಿಗದ ಅಧ್ಬುತವಾದ
ಭೂತಾರಾಧನೆ
ತುಳುನಾಡಿನಲ್ಲಿ ಮಾತ್ರ ನಮಗೆ ಸಿಗಲು ಸಾಧ್ಯ.ತುಳುನಾಡು
ಎನ್ನುವುದು ಸಾವಿರ ದೈವಗಳ ಆರಾಧನ ಪ್ರದೇಶ. ಎಲ್ಲಾ ಜಾತಿ ಬಾಂಧವರು ಒಟ್ಟಾಗಿ ಸೇರಿ ಮಾಡುವ ಆರಾಧನೆಯಂತ ಇದ್ದರೆ ಅದು ಭೂತಾರಾಧನೆ ಮಾತ್ರ.ದೈವದ ಕೊಡಿಯಡಿ
ಯಲ್ಲಿ ಎಲ್ಲರು ಅವರಿಗೆ ಕೇವಲ ಭಕ್ತರು ಮಾತ್ರ. ಇದು ಜಾತಿಯನ್ನು ಮೀರಿ ಬೆಳೆದ ಆರಾಧನೆ.
ಕೇವಲ
ತುಳುನಾಡು
ಮತ್ತು ಕೆಲವು ಆಸುಪಾಸಿನ ಪ್ರದೇಶಗಳಲ್ಲಿದ್ದ ಭೂತಾರಾಧನೆ ಇಂದು ಮಾಯನಗರಿಯಾದಮುಂಬೈ
ಯು ಕಾಲಿಟ್ಟಿದೆ ಎಂದಾದರೆ ಅದು ದೈವಗಳ ಕಾರಣೀಕವೆ ಸೈ. ಅಂತಹಭೂತಾರಾದನೆ
ಯಲ್ಲಿಗರಡಿ
ಆರಾಧನೆಯು ತನ್ನದೇ ರೀತಿಯ ಛಾಪನ್ನು ಒತ್ತಿದೆ. 66ಗರಡಿ
33 ತಾವು ಎನ್ನುವ ಮಾತಿದ್ದರು ಇಂದಿಗೆ ಸುಮಾರು ಅಂದಾಜು 265ಗರಡಿ
ಗಳು ಇವೆ ಎನ್ನುವ ಮಾತಿದೆ.ಗರಡಿ
ಆರಾಧನೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಬಿನ್ನತೆಯಿದ್ದರು ನೇತ್ರಾವತಿ ನದಿಯ ಒಳಗಿರುವ ಗರಡಿಗಳು ಒಂದೇ ರೀತಿಯ ಕ್ರಮದಲ್ಲಿ ನೇಮವನ್ನು ನಡೆಸುತ್ತಿದೆ.
ನೇ
ಮ
ಎನ್ನುವುದುನಿಯಮ ಪ್ರಕಾರ
ಆಗುವಂತಹುದು. ಎಲ್ಲಾ ದೈವಗಳ ನರ್ತನ ಸೇವೆಯನ್ನು ನೇಮ ಎಂದು ಕರೆಯುವ ವಾಡಿಕೆ ಇಲ್ಲ. ಕೆಲವೊಂದು ದೈವಗಳ ನರ್ತನ ಸೇವೆಯನ್ನು ನೇಮ ಎಂದು ಕರೆಯುವುದು ವಾಡಿಕೆ. ಅವುಗಳಲ್ಲಿ ಅಗ್ರಪಂಕ್ತಿಯಲ್ಲಿ ಇರುವುದುಬೈದೇರು
ಗಳ ನೇಮ. ಎಣ್ಮೂರ ದೇವಣ್ಣ ಬಲ್ಲಾಳರು ಅನಾದಿಯಲ್ಲಿ ಮಾಡಿದ ಕ್ರಮದ ಪ್ರಕಾರ ಇಂದಿಗೂ ಕೂಡ ನೇತ್ರಾವತಿ ಹೊಳೆಯ ಒಳಗಿರುವಗರಡಿ
ಗಳು ಚಾಚು ತಪ್ಪದೆ ಅದೇ ಕ್ರಮದಲ್ಲಿಎಣ್ಮೂರ ದೇವು ಬಲ್ಲಾಳೆರ್ ಮಂತಿ ಕಟ್ಟ್
ಅಂತ ಹೇಳುತ್ತಾ ನೇಮವನ್ನು ಮಾಡಿಸುತ್ತಿದ್ದಾರೆ. ಅದೆಷ್ಟೂ ವರ್ಷಗಳು ಸಂದರೂ ಕೂಡ ಇವತ್ತಿಗೂ ಅದೇ ಕ್ರಮದಲ್ಲಿ ಆಗುತ್ತಿದೆ.
ಕಟ್ಟಲೆ ಆಯಾಯ
ಗರಡಿ
ಗಳಲ್ಲಿ ವಿಭಿನ್ನವಾಗಿದ್ದರೂ ಕೂಡಕಟ್ಟ್
ಬದಲಾಗಿಲ್ಲ. ನೇಮಕ್ಕೆ ದಿನ ಇಟ್ಟ 7 ದಿನಗಳ ಮುಂಚೆಗೊನೆ ಮುಹೂರ್ತ
ವಾಗುತ್ತದೆ. ಇಲ್ಲಿ 33 ಸ್ವಸ್ತಿಕ ಇಟ್ಟು ತಂಬಿಲ ಶುದ್ದ ಹೋಮ ನಡೆದುಕಂಚಿಕಲ್ಲಿ
ಗೆ ಕಾಯಿ ಹೊಡೆಯುವ ಕ್ರಮವಿದೆ. ನಂತರ ನೇಮದ ಕಟ್ಲೆಬೈದೇರು
ಗಳ ಕಿರುಬಾಳು ಭಂಡಾರ ತೆಗೆಯುವುದರಿಂದ ಪ್ರಾರಂಭವಾಗುತ್ತದೆ. ಕೆಲವು ಕಡೆಗಳಲ್ಲಿಗರಡಿ
ಯಲ್ಲೆ ಭಂಡಾರ ಇದ್ದರೆ ಕೆಲವು ಕಡೆಗಳಲ್ಲಿ ತಾವು ಚಾವಡಿಯಲ್ಲಿ ಅಥವ ಮನೆಯ ಒಳಗಿನಿಂದ ದರ್ಶನ ಪಾತ್ರಿಗಳುಹುಟ್ಟುಕಟ್ಟ
ನ್ನು ಹೇಳಿ ಆವೇಶ ಭರಿತರಾಗಿ ಭಂಡಾರ ಹೊರಟುಗರಡಿ
ಗೆ ಪ್ರವೇಶವಾಗುತ್ತದೆ. ನಂತರ ನೇಮ ಕಟ್ಟುವಪರವ
ಸಮುದಾಯವರಿಗೆ ಎಣ್ಣೆ ಬೂಲ್ಯ ನೀಡಲಾಗುತ್ತದೆ. (ಕೊಡಿ ತಿಂಗಳ ಮತ್ತು ಸೋನದ ಕೋಲದಲ್ಲಿ ಪಂಬದ ಸಮುದಾಯವರುಬೈದೇರು
ಗಳಿಗೆ ಕೋಲ ಕಟ್ಟುತ್ತಾರೆ) ತದನಂತರ ನೇಮ ಕಟ್ಟುವವರು ಭತ್ತದಿಂದಬೈದೇರು
ಗಳ ಪ್ರತಿ ರೂಪವನ್ನುಕೋಟಿ ಚೆನ್ನಯ
ರ ಸಂಧಿಯನ್ನು ಹೇಳುತ್ತಾ ಬಿಡಿಸುತ್ತಾರೆ. ನಂತರಬೈದೇರು
ಗಳ ಪಾತ್ರಿಗಳು ಮತ್ತು ಸಹಾಯಕರು ಸೇರಿ ಭತ್ತದ ಪ್ರತಿ ರೂಪದ ಮೇಲೆ ಮಾವಿನ ಎಲೆ ಇಟ್ಟು ಅದರ ಮೇಲೆ ಬಾಳೆಯ ದಿಂಡಿನ ಸಿಪ್ಪೆಯಿಂದಗರಿಯ
ವನ್ನು(ಸಾಮ
) ಕಟ್ಟುತ್ತಾರೆ. ಆಮೇಲೆ ಶುಚಿರ್ಭೂತರಾದ ನೇಮ ಕಟ್ಟುವ ಪಾತ್ರಿಗಳು ಚೆಂಡಿನ ಬೂಲ್ಯವನ್ನು ಪಡೆದುಕೊಂಡು ಸಿಂಗಾರ ಮಾಡಿಸಿಕೊಳ್ಳಲು ಕೂರುತ್ತಾರೆ. ಆ ಸಮಯದಲ್ಲಿಗರಡಿ
ಯ ಒಳಗೆ ಪಾತ್ರಿಗಳು ಹೋಮ ಇಟ್ಟು 66 ಸ್ವಸ್ತಿಕ ಸಿಂಗದನದಲ್ಲಿ ಬಡಿಸುತ್ತಾರೆ. ಅರದಾಳ ಮುಗಿಸಿದ ನೇಮ ಕಟ್ಟುವ ಪಾತ್ರಿಗಳುಗರಡಿ
ಯ ಒಳಗೆ ಬರುತ್ತಾರೆ. ಆ ಸಮಯದಲ್ಲಿಕೋಟಿ
ಪಾತ್ರಿಯು ಗರಿಯದ ( ಬರಿಯ) ಮಧ್ಯದಲ್ಲಿ ಕೂತುಹೋಮ
(ಸೋಮ) ಇಡುತ್ತಾರೆ. ಅಷ್ಟು ಹೊತ್ತಿಗೆ ನೇಮ ಕಟ್ಟುವ ಪಾತ್ರಿಗಳುಬೈದೇರು
ಗಳ ಹುಟ್ಟು ಕಟ್ಟುನ್ನು ರಾಗವಾಗಿ ಹಾಡುತ್ತಾರೆ. ನಂತರ ಗಿಂಡೆ ನೀರಿನಿಂದ ಶುದ್ದ ಮಾಡಿಸಿಕೊಳ್ಳುತ್ತಾರೆ. ನಂತರಗರಡಿ
ಯ ಮುಖ್ಯಸ್ಥ ಅಥವ ಸಂಬಂಧಪಟ್ಟವರು ಮೂರು ಸಲ ಪಾರಿಯನ್ನು ಹೇಳುತ್ತಾರೆ. ಅವೇಶ ಬರಿಸಿಕೊಂಡ ಪಾತ್ರಿಗಳು ಮೀಸೆ ಧರಿಸದೆಗರಡಿ
ಇಳಿದು ಸಂಬಂಧ ಪಟ್ಟವರಿಗೆ,ಗರಡಿ
ಮನೆತನದವರಿಗೆ ಜೀಟಿಗೆ ಹಿಡಿದು ಅಭಯ ನೀಡುತ್ತಾರೆ. ತದನಂತರ ಬೆರ್ಮರ ಗುಂಡದ ಬಳಿ ಹೋಗಿ ತೆಂಗಿನಕಾಯಿ ಕಾಣಿಕೆಯನ್ನು ಇಡುತ್ತಾರೆ. ಅದನ್ನು ಕುಟುಂಬದ ಯಜಮಾನ ಹಿಡಿದುಕೊಂಡು ಬಂದು ಮನೆಯೊಳಗೆ ಇಡುತ್ತಾನೆ. ನಂತರಬೈದೇರು
ಗಳು ರಂಗಸ್ಥಳ ಪ್ರವೇಶ ಮಾಡುತ್ತಾರೆ. ಅಲ್ಲಿ ನರ್ತನ ಸೇವೆಯನ್ನು ಮಾಡಿ ನಂತರಗರಡಿ
ಪ್ರವೇಶ ಮಾಡಿ ಮೀಸೆ ಧರಿಸಿಗರಡಿ
ಇಳಿಯುತ್ತಾರೆ. ಆ ಸಮಯದಲ್ಲಿಗರಡಿ
ಪಾತ್ರಿಗಳು ಸಹಾಯಕರು ಕೈ ಕೈ ಹಿಡಿದುಕೊಂಡುಬೈದೇರು
ಗಳಿಗೆ ಮುಖ ಮಾಡಿ ಚಲಿಸುತ್ತಾರೆ. ಅವರ ಮುಂದಿನಿಂದಬೈದೇರು
ಗಳು ಕುಣಿಯುತ್ತಾ ತಮ್ಮ ಕೈಯಲ್ಲಿದ್ದ ಚವಳದಿಂದ ಆಶೀರ್ವಾದ ಮಾಡುತ್ತಾ ಬರುತ್ತಾರೆ. ರಂಗಸ್ಥಳಕ್ಕೆ ಬಂದಾಗ ಕೈಯನ್ನುಬೈದೇರು
ಗಳಚಪ್ಪರಕೊಂಬು
ಮುಟ್ಟಿ ನಮಸ್ಕರಿಸಿ ಪಾತ್ರಿಗಳುಗರಡಿ
ಯ ಹತ್ತಿರ ಹೋಗುತ್ತಾರೆ.ಬೈದೇರು
ಗಳು ರಂಗಸ್ಥಳದಲ್ಲಿ ನರ್ತನ ಸೇವೆ ನೀಡುತ್ತಾರೆ. ಆ ಸಮಯದಲ್ಲಿ ದರ್ಶನ ಪಾತ್ರಿಗಳು ಅವೇಶ ಭರಿತರಾಗಿ ಸುರಿಯ ಹಿಡಿದುಗರಡಿ
ಇಳಿದುಗರಡಿ
ಮುಂದೆ ಇರುವಲೋವೆ ಕಂಬ
ಅಥವ ರಂಗಸ್ಥಳದ ಬಳಿಯಿರುವ ಲೋವೆ ಕಂಬದ ಅಡಿಗೆ ಬರುತ್ತಾರೆ. ಆ ಸಮಯದಲ್ಲಿ ದರ್ಶನ ಪಾತ್ರಿಗಳು ನೇಮದ ಪಾತ್ರಿಗಳು ಎದುರು ಬದಿರಾಗಿ ಚಲಿಸಿಕೊಂಡು ಸುರಿಯನ್ನು ನೇಮದ ಪಾತ್ರಿಗಳಿಗೆ ಹಸ್ತಾಂತರ ಮಾಡುತ್ತಾರೆ. ನಂತರಬೈದೇರು
ಗಳು ಸುರಿಯ ನರ್ತನ ಮತ್ತುಗರಡಿ
ಸಾಧಗದ ಪಟುಗಳನ್ನು ನೆರೆದಿರುವ ಭಕ್ತ ಸಮುದಾಯಕ್ಕೆ ತೋರಿಸುತ್ತಾರೆ.
ಆ ನಂತರ
ಮಾಣಿಬಾಲೆ
(ಮಾಯಂದಾಲ್
) ಅಲಂಕಾರಗೊಂಡು ಕೈಯಲ್ಲಿ ಅಕ್ಕಿ ತೆಂಗಿನಕಾಯಿ ಹಿಂಗಾರ ಮತ್ತು ಅರ್ಧ ತೆಂಗಿನಕಾಯಿಯ ತುಂಡಿನಲ್ಲಿ ಉರಿಯುವ ದೀಪ ಹಾಗೂ ಗೆಜ್ಜೆಕತ್ತಿ ಇರುವ ಹರಿವಾಣವನ್ನು ಹಿಡಿದುಕೊಂಡು ಇಳಿಯುತ್ತಾರೆ. ಆಕೆ ಬಾಣಂತಿ ತಾಯಿಯಾಗಿರುವುದರಿಂದ ಅಲ್ಲಲ್ಲಿ ತಲೆಸುತ್ತಿ ಬೀಳುವ ಕ್ರಮವಿದೆ. ಆಗ ಗಿಂಡೆಯ ಪಾತ್ರಿ ಆಕೆಗೆ ಗಿಂಡೆ ನೀರನ್ನು ಪ್ರೋಕ್ಷಣೆ ಮಾಡುತ್ತಾ ಇರುತ್ತಾರೆ.ಗರಡಿ
ಇಳಿದು ರಂಗಸ್ಥಳದ ಲೋವೆ ಕಂಬದ ಹತ್ತಿರ ಬಂದಾಗ ಆಕೆಯ ಅಣ್ಣಂದಿರಾದಕೋಟಿ ಚೆನ್ನಯ
ರು ಬಂದು ಆಕೆಯನ್ನು ಇದಿರುಗೊಂಡು ಅಲ್ಲಿ ನರ್ತನ ಸೇವೆಯನ್ನು ನೀಡಿ ಅಣ್ಣಂದಿರ ಆಶೀರ್ವಾದ ಪಡೆದು ನೆರೆದ ಭಕ್ತರಿಗೆ ಮಾಯಂದಾಲ್ ಪ್ರಸಾದ ವಿತರಣೆ ಮಾಡುತ್ತಾಳೆ. ನಂತರಗರಡಿ
ಪ್ರವೇಶ ಮಾಡಿ ಕಾಯ ಬಿಟ್ಟು ಮಾಯ ಸೇರುತ್ತಾಳೆ.ಬೈದೇರು
ಗಳು ರಂಗಸ್ಥಳದಲ್ಲಿ ದೇಯಿ ಬೈದೆತಿಯ ನಡೆಯನ್ನು ಹೇಳುತ್ತಾರೆ. ಆ ನಂತರಬುದ್ಯಂತ
ನನ್ನು ಜಯಿಸುವ ಅಣುಕನ್ನು ತೋರಿಸುತ್ತಾರೆ. ಆ ನಂತರ ಸುರಿಯವನ್ನು ದರ್ಶನ ಪಾತ್ರಿಗಳಿಗೆ ಹಸ್ತಾಂತರ ಮಾಡುತ್ತಾರೆ.
Share this postಸೂರ್ಯೋದಯ ಆಗುವ ಮುಂಚೆ ದರ್ಶನ ಪಾತ್ರಿಗಳು
ಎಡೆಕಟ್ಟು
(ಚೆಂಡು ಹಾಕಿಕೊಳ್ಳುವುದು) ಸಂದಾಯ ಮಾಡಿಕೊಂಡು ಸುರಿಯವನ್ನು ನೇಮದ ಪಾತ್ರಿಗಳಿಗೆ ಹಸ್ತಾಂತರ ಮಾಡುತ್ತಾರೆ. ಆ ನಂತರಕೋಟಿ ಚೆನ್ನಯ
ರು ಕೈಯಲ್ಲಿ ಹಿಂಗಾರ ಹಿಡಿದುಕೊಂಡು ಮತ್ತುಕುಜುಂಬ ಕಾಂಜವ
ರು ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡು ಕುಜುಂಬ ಕಾಂಜವರ ಹುಟುಕಟ್ಟನ್ನು ಹೇಳಿಗರಡಿ
ಯ ಒಳಗೆ ಹೋಗಿ ಗರಿಯದ ಮುಂದೆ ಕಾಣಿಕೆಯನ್ನು ಇಡುತ್ತಾರೆ. ತದನಂತರ ನೇಮದಲ್ಲಿಬೈದೇರು
ಗಳು ಎದೆಕಟ್ಟು ಸಂದಾಯ ಮಾಡಿ ಕೊಳ್ಳುತ್ತಾರೆ. ಆ ನಂತರಬೈದೇರು
ಗಳು ರಂಗಸ್ಥಳದ ಅಲಂಕಾರವನ್ನು ಎಳೆದು ತೆಗೆಯುತ್ತಾರೆ. ಇದು ಅವರು ತಮ್ಮ ಅಂತ್ಯವನ್ನು ಸೂಚಿಸುವ ಕ್ರಮವಾಗಿದೆ. ನಂತರ ಪಟ್ಟಾವು ಇಳಿಯುವ ಕ್ರಮ ಮಾಡುತ್ತಾರೆ. ತಮ್ಮ ಹುಟ್ಟುಕಟ್ಟುನ್ನು ರಾಗಬದ್ದವಾಗಿ ಹಾಡುತ್ತಾರೆ. ಆ ಸಮಯದಲ್ಲಿ ಗಿಂಡೆ ಪಾತ್ರಿಯುಬೈದೇರು
ಗಳು ಹೇಳುವ ಸಂಧಿ ಪ್ರಕಾರ ನೆಲಕ್ಕೆ ನೀರನ್ನು ಪ್ರೊಕ್ಷಣೆ ಮಾಡುತ್ತಾರೆ. ನಂತರ ರಂಗಸ್ಥಳ ಬಿಟ್ಟುಬೈದೇರು
ಗಳುಗರಡಿ
ಮನೆ ಅಥವ ಧರ್ಮ ಚಾವಡಿಗೆ ಹೋಗಿ ತುಳಸಿ ಕಟ್ಟೆಗೆ ತಮ್ಮ ಸುರಿಯದಿಂದ ಭತ್ತವನ್ನು ಹಾಕಿ ನಂತರ ಗಿಂಡೆ ಹಾಲು ಮತ್ತು ಬಾಳೆಹಣ್ಣು ಸ್ವೀಕಾರ ಮಾಡುತ್ತಾರೆ. ನಂತರ ಹಾಲು ಕುಡಿದ ಮನೆ ಮತ್ತು ಚಾವಡಿಗೆ ಅಕ್ಕಿ ಹಾಕಿಗರಡಿ
ಯ ಹತ್ತಿರ ಬಂದು ಎಲ್ಲರಿಗೂ ಗಂಧ ಪ್ರಸಾದ ನೀಡಿ ಕಂಚಿಕಲ್ಲಿಗೆ ಕಾಯಿ ಹೊಡೆದು ಅಭಯ ನೀಡಿಗರಡಿ
ಪ್ರವೇಶ ಮಾಡಿ ಯಜಮಾನನಿಗೆ ಕಟ್ಟೊತ್ತರ ಬೂಲ್ಯ ನೀಡಿ ಗಿಂಡೆಗೆ ಅಕ್ಕಿ ಹಾಕಿ ಗಿಂಡೆಯ ಅಭಯ ನೀಡಿ ಗರಿಯಕ್ಕೆ ಸುರಿಯ ಊರಿ ಕಾಯ ಬಿಟ್ಟು ಮಾಯ ಸೇರುತ್ತಾರೆ. ಆ ಸಮಯದಲ್ಲಿ ನರ್ತನ ಪಾತ್ರಿಗಳ ಹಣೆಗೆ ನಾಣ್ಯವನ್ನು ಅಂಟಿಸುವ ಕ್ರಮವಿದೆ. ತದನಂತರ ಗರಿಯದ ಮೇಲಿರುವ ಚಕ್ರಂದ ಬಲಿಯನ್ನು ನರ್ತನ ಪಾತ್ರಿಗಳು ಹೊರಗೆ ಇಡುತ್ತಾರೆ. ಆ ನಂತರ ಕೆಲವು ಕಡೆ ಜೋಗಿ ಪುರುಷನಿಗೆ ಕಟ್ಟಲೆಯ ಕೋಲ ನಡೆಯುತ್ತೆ. ಈ ರೀತಿಯಾಗಿ ಯಾವುದೇ ಚ್ಯುತಿ ಬಾರದೆ ದೇವು ಬಲ್ಲಾಳರ ಕಟ್ಲೆಯ ಪ್ರಕಾರ ನೇಮವು ನಿಯಮ ಪ್ರಕಾರವಾಗಿ ನಡೆಯುತ್ತಿದೆ. ಇವತ್ತಿಗೂಗರಡಿ
ಗಳು ಭಕ್ತರ ಶ್ರದ್ದಾ ಕೇಂದ್ರವಾಗಿದೆ. ಎಷ್ಟೇ ಆಡಂಬರದಗರಡಿ
ಗಳು ಇದ್ದರೂ ಕೂಡ ಕಟ್ಲೆಗಳಲ್ಲಿ ಆಡಂಬರ ಬಂದಿಲ್ಲ ಅದು ಅನಾದಿಯ ನಂಬಿಕೆಯಲ್ಲಿಯೇ ಬೇರೂರುತ್ತಾ ಇದೆ.ಬರಹ:-
ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ